ಕ್ರಿಸ್ತನ ಮರಣದ ವಾರ್ಷಿಕಾಬ್ದಿಕದ ಆಚರಣೆ. ಈಸ್ಟರ್ ದಿನದ ಹಿಂದಿನ ಶುಕ್ರವಾರ ಎಲ್ಲ ಕ್ರೈಸ್ತರೂ ಇದನ್ನು ಆಚರಿಸುತ್ತಾರೆ. ಬಹುಶಃ ಮೊದಲಲ್ಲಿ ಗಾಡ್ಸ್‌ ಫ್ರೈಡೆಯಾಗಿದ್ದು ಕಾಲಾಂತರದಲ್ಲಿ ಗುಡ್ ಫ್ರೈಡೆ ಆಗಿರಬಹುದು. ಗುಡ್ ಫ್ರೈಡೆ ಆಚರಣೆ ಪ್ರ.ಶ. 100ರಲ್ಲಿ ಪ್ರಾರಂಭವಾಯಿತೆಂಬುದಕ್ಕೆ ದಾಖಲೆ ದೊರಕುತ್ತದೆ. ಇದು ಸಾಮಾನ್ಯವಾಗಿ ಈಸ್ಟರ್ ದಿನದ ಹಿಂದಿನ ಶುಕ್ರವಾರ ಉಪವಾಸವನ್ನು ಆಚರಿಸುತ್ತಿದ್ದರು. ಇದು ಪ್ರ.ಶ. 300ರ ಅನಂತರ ಆಚರಣೆಗೆ ಪ್ರಾರಂಭವಾಗಿದೆ. ಇದರ ಆಚರಣೆ ಕ್ರೈಸ್ತರೆಲ್ಲರಲ್ಲೂ ಒಂದೇ ತೆರನಾಗಿರುವುದಿಲ್ಲ. ಪ್ರಾಟೆಸ್ಟಂಟರು ಅಂದು ದೇವರ ಸ್ತೋತ್ರ ಮಾಡುತ್ತಾರೆ. ಇದು ತುಂಬ ಸರಳ ಸಂಸ್ಕಾರ. ರೋಮನ್ ಕ್ಯಾಥೊಲಿಕರ ಆಚರಣೆ ಹೆಚ್ಚು ವಿಸ್ತಾರವಾದದ್ದು. ಅವರ ಚರ್ಚುಗಳಲ್ಲಿ ಅದು ಗುರುವಾರ ಸಂಜೆಯಿಂದ ಪ್ರಾರಂಭವಾಗಿ ಶುಕ್ರವಾರ ಸಂಜೆಯ ಪರ್ಯಂತ ನಡೆಯುತ್ತದೆ. ಪ್ರಭುಭೋಜನಕ್ಕೆ ಸಂಬಂಧಪಟ್ಟಂತೆ ಶುಕ್ರವಾರ ಬೆಳಗ್ಗೆ ನಡೆಯುವ ಪೂಜಾವಿಧಾನ ಇದರ ಮುಖ್ಯ ಅಂಗ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ